May 252015
 

KSR-Logo

 

ಸೇಯಿಂಟ್ ಲೂಯಿಸ್ಸಿನ ಸಂಗಮದ ಆಶ್ರಯದಲ್ಲಿ, ಮಧ್ಯವಲಯದ ಇತರ ಕನ್ನಡ ಕೂಟಗಳ ಸಹಕಾರದೊಂದಿಗೆ ಇದೇ ಮೇ 30 ಮತ್ತು 31ರಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ತಪ್ಪದೇ ಬಾಗವಹಿಸಿ ಎಂದು ರಂಗದ ಪರವಾಗಿ ಮತ್ತು ಸಂಗಮದ ಪದಾಧಿಕಾರಿಗಳ ಪರವಾಗಿ ತಮ್ಮನ್ನೆಲ್ಲ ಆಹ್ವಾನಿಸಲು ನಮಗೆ ತುಂಬಾ ಸಂತಸವಾಗುತ್ತಿದೆ. ಈ ಬಾರಿಯ ನಮ್ಮ ಸಮ್ಮೇಳನದ ಮುಖ್ಯ ವಿಷಯ “ಅನುವಾದ ಸಾಹಿತ್ಯ.” ಕನ್ನಡ ಅನುವಾದ ಸಾಹಿತ್ಯ ಪ್ರಪಂಚದಲ್ಲಿ ಮುಖ್ಯರಾದ ಡಾ|| ಪ್ರಧಾನ್ ಗುರುದತ್ತರು ಮುಖ್ಯ ಅತಿಥಿಗಳಾಗಿ ಭಾರತದಿಂದ ಆಗಮಿಸಿದ್ದಾರೆ, “ಅನುವಾದದ ಆಗುಹೋಗುಗಳು” ಎಂಬ ವಿಷಯದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ನಮ್ಮವರೇ ಆದ ಪ್ರಸಿದ್ಧ ಭಾಷಾವಿಜ್ಞಾನಿ, ಡಾ|| ಎಸ್.ಎನ್ ಶ್ರೀಧರ್ ಮತ್ತು ಅನುವಾದದ ವಿಷಯದಲ್ಲಿ ಪ್ರಾವೀಣ್ಯ ಗಳಿಸಿರುವ ಆಂಗ್ಲಭಾಷಾ ಪ್ರಾಧ್ಯಾಪಕ ಡಾ|| ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಆಗಮಿಸಿ “ಅನುವಾದ ಕಮ್ಮಟ” ಮತ್ತು “ಸಂವಾದ” ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಲೇಖನಗಳನ್ನೊಳಗೊಂಡ “ಅನುವಾದ ಸಂವಾದ” ಎಂಬ ಕನ್ನಡ ಪುಸ್ತಕ, ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದವಾದ ಲೇಖನಗಳನ್ನೊಳಗೊಂಡ “A Little Taste of Kannada-in English” ಎಂಬ ಆಂಗ್ಲ ಪುಸ್ತಕಗಳನ್ನು ರಂಗ ಲೋಕಾರ್ಪಣೆ ಗೊಳಿಸಲಿದೆ. ಇವೇ ಅಲ್ಲದೆ, ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಅವರು ಸಂಪಾದಿಸಿರುವ “ಅಮೆರಿಕನ್ನಡ ಬರಗಾರರ ಮಾಹಿತಿ ಕೋಶ” ಸಹ ಲೋಕಾರ್ಪಣೆಗೊಳ್ಳಲಿದೆ. ಸಂಗಮದ ಮುಂದಾಳತ್ವದಲ್ಲಿ “ಸೊಬಗು” ಎಂಬ ಸ್ಮರಣ ಸಂಚಿಕೆ ಸಹ ಸಿದ್ಧವಾಗುತ್ತಿದೆ. ರಂಗದ ಸಂಸ್ಥಾಪಕರಲ್ಲಿ ಮೊದಲಿಗರಾದ ಎಚ್.ವೈ. ರಾಜಗೋಪಾಲರು ಅನುವಾದಿಸಿರುವ “ಸೃಷ್ಟಿ” (ಅಮೆರಿಕದ ರೆಡ್ ಇಂಡಿಯನ್ ಕಥೆಗಳು) ಎಂಬ ಪುಸ್ತಕವನ್ನು ನೋಂದಾಯಿಸಿಕೊಂಡವರಿಗೆಲ್ಲ ರಂಗದ ವತಿಯಿಂದ ವಿತರಿಸಲಾಗುವುದು. ಪ್ರತಿ ಬಾರಿಯೂ ನಾವು ನಡೆಸುವ ಕವಿಗೋಷ್ಠಿ, ಬರಹಗಾರರ ಮತ್ತು ಅವರ ಇತ್ತೀಚಿನ ಪ್ರಕಟಣೆಗಳ ಪರಿಚಯ, ಇವುಗಳ ಜೊತೆಗೆ, ಈ ಬಾರಿ ಸ್ವಾರಸ್ಯಕರವಾದ ಒಂದು ಅನುವಾದ ಕಮ್ಮಟವನ್ನೂ ಏರ್ಪಡಿಸಲಾಗಿದೆ. ಕೇವಲ ಸಾಹಿತ್ಯ ಮಾತ್ರ ಎಂದು ದಿಗಿಲುಪಡದಿರಿ, ಸಂಗಮದ ನಾಟ್ಯಪಟು ಪ್ರಸನ್ನ ಕಸ್ತೂರಿಯವರ ನಿರ್ದೇಶನದಲ್ಲಿ ಗೀತ-ನಾಟ್ಯ-ನಟನ-ನಾಟಕ-ಪ್ರಿಯರ ಮನಸ್ಸನ್ನು ಸೂರೆಗೊಳ್ಳುವ ಮನರಂಜನಾ ಕಾರ್ಯಕ್ರಮಗಳಲ್ಲಿ ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಂಗಮದ ಜೊತೆಗೆ ಕೈಜೋಡಿಸಲು ಸಿನ್ಸಿನ್ಯಾಟಿ, ಶಿಕಾಗೋ, ಇಂಡಿಯನಾಪೊಲಿಸ್, ಲಿಟಲ್ ರಾಕ್, ನ್ಯಾಷವಿಲ್, ಮಿಲ್ವಾಕಿ, ಬ್ಲೂಮಿಂಗ್ ಟನ್ ಮುಂತಾದ ನಗರಗಳ ಕನ್ನಡ ಕೂಟಗಳೂ ಸಿದ್ಧವಾಗಿ ನಿಂತಿವೆ! ಮಕ್ಕಳಿಗಾಗಿ ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಸಹ ಲೋಕಾರ್ಪಣೆಯಾಗಲಿದೆ. ಕನ್ನಡ ಪುಸ್ತಕಗಳ ಮಳಿಗೆಯಲ್ಲಿ ನಮ್ಮವರೇ ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗುತ್ತದೆ, ಕೊಂಡು ಓದಿ ಸಂತಸಪಡಲು ಇದೊಂದು ಉತ್ತಮ ಅವಕಾಶ. ಕೊನೆಯದಾಗಿ, ಆದರೆ ಮುಖ್ಯವಾಗಿ, ಉತ್ತಮ ಊಟೋಪಚಾರಗಳ ಏರ್ಪಾಟು ಭರದಿಂದ ಸಾಗಿದೆ! ಸಾಹಿತ್ಯಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಲು ಸಂಗಮದ ಜ್ಯೋತಿ ಮೈಸೂರ್ ಮತ್ತು ಶುಭಾ ಭಾಸ್ಕರ್ ಅವರ ತಂಡದ ಸ್ವಯಂಸೇವಕರು ತವಕದಿಂದ ಕಾದಿದ್ದಾರೆ. ಕಾರ್ಯಕ್ರಮಗಳ ಪಕ್ಷಿನೋಟವನ್ನು ಕೆಳಗೆ ಕೊಡಲಾಗಿದೆ, ಹೆಚ್ಚಿನ ವಿವರಗಳಿಗೆ kannadasahityaranga.org ಮತ್ತು sangamastl.com ಈ ಜಾಲತಾಣಗಳಿಗೆ ಭೇಟಿ ಕೊಡಿ.

] ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮದು!

ಮೈ.ಶ್ರೀ. ನಟರಾಜ, ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷ

ನಾಗ ಐತಾಳ, ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷ

 

 

 Posted by at 9:53 PM
May 252015
 

KSR-Logoಕಾರ್ಯಕ್ರಮಗಳ ವಿವರಗಳು ಹೀಗಿವೆ.

ಶನಿವಾರ

(1) ಮಧ್ಯಾಹ್ನ 12:00-1:00 – ಆಗಮನ ಮತ್ತು ನೋಂದಣಿ

(2) 1:00-2:00 – ಸ್ವಾಗತ ಗೀತೆ, ಉದ್ಘಾಟನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯ, ಪುಸ್ತಕಗಳ ಲೋಕಾರ್ಪಣೆ ಮತ್ತು ಬರಹಗಾರರಿಗೆ ವಿತರಣೆ

(3) 2:00-3:00 – ಪ್ರಾಸ್ತಾವಿಕ ಭಾಷಣ, “ಅನುವಾದದ ಆಗುಹೋಗುಗಳು” ಮುಖ್ಯ ಅತಿಥಿ ಪ್ರಧಾನ ಗುರುದತ್ತರಿಂದ

(4) 3:00-3:30 – ಚಹಾ ವಿರಾಮ

(5) 3:30-5:00 – ಸಾಹಿತ್ಯ ಗೋಷ್ಠಿ, ಸ್ವಂತ ಹಾಗು ಅನುವಾದಿತ ಕೃತಿಗಳ ಪ್ರಸ್ತುತಿ (ನಡೆಸಿಕೊಡುವವರು: ನಳಿನಿ ಮೈಯ ಮತ್ತು ವೈಶಾಲಿ ಹೆಗ್ಡೆ)

(6) 5:05-5:15 – ಕವಿ ನಮನ (ಸಂಗಮ ಕಲಾವಿದರಿಂದ)

(7) 5:15-5:30 – ಶ್ರದ್ಧಾಂಜಲಿ (ಅಗಲಿದ ಹಿರಿಯರ ಸ್ಮರಣೆ; ನಡೆಸಿಕೊಡುವವರು: ಎಚ್.ಕೆ. ಚಂದ್ರಶೇಖರ್ ಮತ್ತು ನಳಿನಿ ಕುಕ್ಕೆ)

(8) 5:30-6:00 – ಪುಸ್ತಕದಂಗಡಿಗೆ ಭೇಟಿ (ಮಂಜುನಾಥ್ ಮತ್ತು ಶಂಕರ ಹೆಗ್ಡೆ)

(9) 6:00-8:30 – ಸಾಂಸ್ಕೃತಿಕ ಕಾರ್ಯಕ್ರಮ (ಪ್ರಸನ್ನ ಕಸ್ತೂರಿ ಅವರ ನಿರ್ದೇಶನದಲ್ಲಿ ಸಂಗಮ ಹಾಗು ಇತರ ಮಧ್ಯವಲಯದ ಕನ್ನಡ ಕೂಟಗಳಿಂದ ನೃತ್ಯ ಮತ್ತು ನಾಟಕ ಪ್ರದರ್ಶನ)

(10) 8:00-10:00 – ಭೋಜನ

ಭಾನುವಾರ

(1) 8:00-9:00 – ಬೆಳಗಿನ ಉಪಾಹಾರ

(2) 9:00-9:10 – ಪ್ರಾರ್ಥನೆ ಮತ್ತು ವಾದ್ಯಗೋಷ್ಠಿ (ಸಂಗಮ ಮಕ್ಕಳಿಂದ)

(3) 9:10-10:40 – ಅನುವಾದ ಕಮ್ಮಟ (ಅನುವಾದಕ್ರಿಯೆಯ ಒಂದು ಮಿಂಚುನೋಟ; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ)

(4) 10:40-10:55 – ವಿವಿಧ ವಿಶೇಷಗಳು (ನಡೆಸಿಕೊಡುವವರು ಮೈ.ಶ್ರೀ. ನಟರಾಜ)

(5) 11:00-12:00 – ನಮ್ಮ ಬರಹಗಾರರು (ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಮತ್ತು ಬರಹಗಾರರ ಪರಿಚಯ; ನಡೆಸಿಕೊಡುವವರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಮೀರಾ ರಾಜಗೋಪಾಲ್)

(6) 12:00-1:00 – ಮಧ್ಯಾಹ್ನದ ಭೋಜನ

(7) 1:00-1:30 – ಪುಸ್ತಕದಂಗಡಿಗೆ ಭೇಟಿ

(8) 1:30-2:30 – ಅತಿಥಿಗಳೊಂದಿಗೆ ಸಂವಾದ (ಪ್ರಧಾನ ಗುರುದತ್ತ, ಎಸ್.ಎನ್. ಶ್ರೀಧರ್ ಮತ್ತು ನಾರಾಯಣ ಹೆಗ್ಡೆ ಅವರೊಂದಿಗೆ ಪ್ರಶ್ನೋತ್ತರಗಳು; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ ಮತ್ತಿತರರು)

(9) 2:30-2:45 – ಚಹಾ ವಿರಾಮ

(10) 2:45-3:45 – ಮಧ್ಯವಲಯದ ವಿವಿಧ ಕನ್ನಡ ಕೂಟಗಳ ಮಕ್ಕಳಿಂದ ಮನರಂಜನೆ ಮತ್ತು ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಬಿಡುಗಡೆ

(11) 3:45-4:30 – ಸ್ವಯಂಸೇವಕರ ಪರಿಚಯ, ವಂದನಾರ್ಪಣೆ ಮತ್ತು ಸಮಾರೋಪ

(12) 4:30ಕ್ಕೆ ವಿದಾಯ!

 

ಒನ್.ಇಂಡಿಯಾದಲ್ಲಿ ಪ್ರಕಟವಾಗಿರುವ ಕಾರ್ಯಕ್ರಮಗಳ ಪಟ್ಟಿ:-

http://kannada.oneindia.com/nri/article/7th-vasantha-sahityotsava-program-details-093906.html

 Posted by at 9:39 PM
May 122015
 

ಕನ್ನಡ ಸಾಹಿತ್ಯ ರಂಗ ಭಾಷಣ ಮಾಲೆ

೧. ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ
– ಡಾ. ಪ್ರಭುಶಂಕರ (೨೦೦೪)

೨. ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ
– ಪ್ರೊ. ಬರಗೂರು ರಾಮಚಂದ್ರಪ್ಪ (೨೦೦೫)

೩. ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ
– ಪ್ರೊ. ಅ.ರಾ. ಮಿತ್ರ (೨೦೦೭)

೪. ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ
– ಡಾ. ವೀಣಾ ಶಾಂತೇಶ್ವರ (೨೦೦೯)

೫. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ
– ಡಾ. ಸುಮತೀಂದ್ರ ನಾಡಿಗ (೨೦೧೧)

೬. ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು
– ಪ್ರೊ. ಕೆ.ವಿ. ತಿರುಮಲೇಶ್ (೨೦೧೩)

೭. ಅನುವಾದ/ಆಗುಹೋಗುಗಳು
– ಪ್ರಧಾನ್ ಗುರುದತ್ತ(೨೦೧೫)

 Posted by at 10:53 AM
May 122015
 

KANNADA SAHITYA RANGA, INC.

What it stands for and what it has achieved so far

 

Kannada Sahitya Ranga is a national organization devoted entirely to the pursuit of Kannada literature. Its mission is to preserve and promote an active interest in Kannada literature among Kannadigas living in this country; to encourage them to write in Kannada giving expression to the thoughts and experiences accumulated over time, particularly in the cross-cultural milieu of the land of their adoption; and to provide a platform and an outlet for such literary endeavors. This it aims to achieve through frequent conferences that bring together literary enthusiasts from all over the country, publication of anthologies containing the writings of local Kannadigas, and similar related efforts.

 

Established in 2003, Kannada Sahitya Ranga has in a short time become a well recognized organization, noted for the quality of its programs and publications. Most American Kannada writers have written for one or the other of its books, many for the first time. It has been registered as a non-profit charitable cultural organization in New Jersey and is granted tax-exempt status by the IRS (Federal Tax EIN 20-0939357).

 

What it has done so far…

 

Conferences, Speakers and Publications: Starting in 2004, Kannada Sahitya Ranga has so far held five conferences in different parts of the country. The 6th conference is being held in Houston, Texas, in co-sponsorship with Kannada Vrinda, supported by several other Kannada organizations of Texas – Austin Kannada Koota, San Antonio Kuvempu Kannada Koota, Mallige Kannada Koota of Dallas, and Rio Grande Valley Kannada Koota. Conferences are held every other spring (odd years). At each conference we have a chief guest invited from Karnataka who delivers a keynote address on an important topic related to the development of Kannada literature. Other Special Guests are also invited. Also, a book is published containing the writings of various American Kannada authors. Some details are given below:

 

2013 – 6th Vasantha Sahityotsava and tenth anniversary of Kannada Sahitya Ranga at Rice University, Houston, TX, cosponsored by Houston Kannada Vrinda, with the cooperation of Mallige Kannada Association, Dallas; Austin Kannada Sangha; Kuvempu Kannada Koota, San Antonio; and Rio Grande Valley Kannada Koota.

Coference Theme: American Experience of  Kannadigas.

Chief Guest: K.V.Tirumalesh

Keynote Address: Progress in Kannada, Challenges and Opportunities for Kannada.

Special Guests: S.N.Sridhar and C.N.Srinath.

Publication: ‘Beru-Sooru’ (Anthology of first person articles depicting American experience);* Ed.: Guruprasad Kaginele, Triveni Shreenivasa Rao, and Jyothi Mahadev).

 

2011 – 5th Vasantha Sahityotsava at Woodside, California (San Francisco Bay Area), cosponsored by North California Kannada Koota, supported by Sahitya Goshthi.

Conference Theme: Essay in Kannada Literature

Chief Guest: Dr. Sumateendra Nadig, noted poet, critic, essayist

Keynote Address: The ‘Essay’ in Kannada Literature.

Special Guest: Bhuvaneshwari Hegde, humorist, writer

Publication: ‘Mathisidashtoo Matu’ (anthology of essays), Ed.: Triveni Srinivasa Rao and M.R. Dattatri

 

2009 – 4th Vasantha Sahityotsava at Universities of Maryland, Rockville, MD, May 20-31, cosponsored by Kaveri Kannada Sangha.

Conference Theme: Kannada novel

Chief Guest: Dr. Veena Shanteshwara, novelist, short story writer

Keynote Address: Kannada Novel in the last quarter century*

Special guest: Vaidehi, short story writer, poet

Publication: ‘Kannada kadambari lokadalli…heege halavu…’ Ed. M.S. Nataraja

 

2007 – 3rd Vasantha Sahityotsava at Balaji Temple, Aurora, IL, May 19-20, cosponsored by Vidyaranya Kannada Koota.

Conference theme: Humor in Kannada Literature

Chief Guest: Prof. A.R. Mitra, scholar, writer, humorist

Keynote address: Humor in Kannada Literature*

Special guest: Dr. H.S. Raghavendra Rao, scholar, critic

Publication: ‘Nageganadam Gelge!’ Eds. H.K. Nanjundaswamy and H.Y. Rajagopal

 

2005 – 2nd Vasantha Sahityotsava at Hoover Herbert Middle School, Lakewood, CA, December 5, 2005, cosponsored by Karnataka Cultural Association, Southern California and supported by  Kasturi Kannada Sangha, San Diego; ‘Anjali,’ Los Angeles

Conference theme: Creative writing in Kannada

Chief Guest: Prof. Baraguru Ramachandrappa, scholar, critic, film maker

Keynote address: Kannada literature and creative freedom*

Publication: ‘Acheecheya Kathegalu,’ Ed. Guruprasad Kaginele

 

2004 – 1st Vasantha Sahityotsava at Villanova University, Villanova, PA, May 29, 2004, cosponsored by the Department of Classical and Modern Languages and Literatures, Villanova University and supported by Triveni, the Kannada Association of Pennsylvania, New Jersey and Delaware.

Conference theme: Kuvempu centenary celebration

Chief Guest: Dr. Prabhushankara, scholar, poet, critic

Keynote address: Kannada literature: a bird’s eye view*

Publication: ‘Kuvempu Sahitya Samikshe,’ Ed. Naga Aithal

 

*All keynote addresses have been separately printed.

 

Kannada Literature workshop

 

In 2006, Kannada Sahitya Ranga conducted a 2-day workshop on the development of Kannada literature from the age of stone edicts to Navodaya, the age of modern literature. The workshop was held in nine major locations in US and was conducted by Dr. N.S. Lakshminarayana Bhatta, noted poet and scholar.  In addition to lecture notes, a 4-volume set of CDs was provided to the participants.

 

Appeal

 

Kannada Sahitya Ranga functions entirely by voluntary effort, with no overhead costs at all; its activities are funded by generous donations by literary enthusiasts and supporters. We appeal to all of you to support this cause. We also appeal to you to purchase our books which are available here and in bookstores in Bangalore.

 

We welcome you to join us in this great endeavor. American Kannadigas can make a great contribution to Kannada literature.

 

 

 Posted by at 10:52 AM