May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಎಸ್.ಎನ್ ಶ್ರೀಧರ್ ಅವರ ಕಿರುಪರಿಚಯ ಇಲ್ಲಿದೆ:-

S.N.Sridhar

ಪ್ರೊಫೆಸರ್ ಎಸ್.ಎನ್ ಶ್ರೀಧರ್ ಅವರು ೧೯೫೦ರಲ್ಲಿ ಶಿವಮೊಗ್ಗದಲ್ಲಿ ಜನಿಸಿ, ಬೆಂಗಳೂರು, ಕೋಲಾರ, ಶಿವಮೊಗ್ಗದಲ್ಲಿ ವಿದ್ಯಾಭ್ಯಾಸ ನಡೆಸಿದರು. ೧೯೮೦ರಲ್ಲಿ, ಇಲಿನಾಯ್ ರಾಜ್ಯದ ‘ಯೂನಿವರ್ಸಿಟಿ ಆಫ್ ಇಲಿನಾಯ್’ನಿಂದ ಭಾಷಾಶಾಸ್ತ್ರದ ಪದವಿ ಪಡೆದು, ಸದ್ಯ ನ್ಯೂಯಾರ್ಕಿನ ‘ಸ್ಟೋನಿಬ್ರೂಕ್’ ವಿಶ್ವವಿದ್ಯಾಲಯದಲ್ಲಿ ಭಾಷಾಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ೧೯೯೭ರಲ್ಲಿ, ಭಾರತೀಯ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿದ್ದಾರೆ. 2001-2008ರವರೆಗೆ ಸ್ಟೋನಿಬ್ರೂಕ್‍ನ ಏಷ್ಯಾ ಹಾಗೂ ಏಷ್ಯನ್ ಅಮೆರಿಕನ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದವರು. ೨೦೧೧ರಲ್ಲಿ, ‘ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್’ ಪ್ರೊ ಶ್ರೀಧರ್ ಅವರನ್ನು ಆ ಸಂಸ್ಥೆಯ ಅತ್ಯುಚ್ಚ ಪದವಿಯಾದ ಗೌರವಾನ್ವಿತ ಪ್ರಾಧ್ಯಾಪಕ ಶ್ರೇಣಿಗೆ ನೇಮಕ ಮಾಡಿ ಗೌರವಿಸಿತು.

ಶ್ರೀಧರ್ ಅವರು ಕನ್ನಡ ಭಾಷೆ ಹಾಗೂ ಕರ್ನಾಟಕ ಭಾಷಾ ಸಂದರ್ಭವನ್ನು ಕೇಂದ್ರವಾಗಿಟ್ಟುಕೊಂಡು ಹಲವಾರು ವಿಭಾಗಗಳಲ್ಲಿ ಸಂಶೋಧನೆಗಳನ್ನು ನಡೆಸಿದ್ದಾರೆ. ಅವರ ‘ಕನ್ನಡ: ಡಿಸ್ಕ್ರಿಪ್ಟಿವ್ ಗ್ರಾಮರ್’ ಆಧುನಿಕ ಕನ್ನಡದ ಅತ್ಯಂತ ವಿಸ್ತಾರವಾದ ವ್ಯಾಕರಣ. ‘ಇಂದಿನ ಕನ್ನಡ: ರಚನೆ ಮತ್ತು ಬಳಕೆ’ ಕನ್ನಡ ಭಾಷೆಯ ಪದ ರಚನೆ, ವಾಕ್ಯ ರಚನೆ, ಇತರ ಭಾಷೆಗಳ ಮೇಲಿನ ಪ್ರಭಾವ, ಇತ್ಯಾದಿಗಳ ವಿಶ್ಲೇಷಣೆ. ಹತ್ತು ಭಾಷೆಗಳ ತುಲನಾತ್ಮಕ ಮನೋವೈಜ್ಞಾನಿಕ ಅಧ್ಯಯನ ಅವರ ‘ಕಾಗ್ನಿಷೆನ್ಸ್ ಎಂಡ್ ಸೆಂಟೆನ್ಸ್ ಪ್ರೊಡಕ್ಷನ್’ ಗ್ರಂಥದ ವಿಷಯ. ಭಾರತೀಯ ನಾಗರೀಕತೆಯ ಅನೇಕ ಮುಖಗಳ ಪ್ರೌಢ ಪರಿಚಯ ಅವರು ಸಹ ಸಂಪಾದಕರಾಗಿರುವ ಉದ್ಗ್ರಂಥ ‘ಅನನ್ಯ: ಎ ಪೊರ್ಟ್ರೈಟ್ ಆಫ್ ಇಂಡಿಯ’ ಎನ್ನುವುದರ ಅಶಯ. ‘ಲಾಂಗ್ವೇಜ್ ಇನ್ ಸೌಥ್ ಏಷಿಯ’ ಶ್ರೀಧರ್ ಅವರು ಸಹಸಂಪಾದಕರಾಗಿ ಹೊರತಂದಿರುವ ಇನ್ನೊಂದು ಕೃತಿ. ಇದರಲ್ಲಿ ದಕ್ಷಿಣ ಏಷ್ಯಾದ ಭಾಷೆಗಳ ಅಧ್ಯಯನವಿದೆ.

ಶ್ರೀಧರ್ ಅವರು, ಶಂಕರ್ ಮೊಕಾಶಿ ಪುಣೇಕರರ ‘ಗಂಗವ್ವ ಗಂಗಾಮಾಯಿ’ಯನ್ನೂ, ಕುಮಾರವ್ಯಾಸ ಭಾರತವನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ.

 Posted by at 5:00 PM
May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ನಾರಾಯಣ ಹೆಗಡೆ ಅವರ ಕಿರುಪರಿಚಯ ಇಲ್ಲಿದೆ:-

NH in St.Louis

 

ನಾರಾಯಣ ಹೆಗಡೆಯವರು ನ್ಯೂಯಾರ್ಕಿನ ‘ವೆಸ್ಟ್‍ಬೆರಿ’ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ. ಕನ್ನಡದ ಪ್ರಮುಖ ಲೇಖಕರಾದ ಯು. ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಎ.ಕೆ ರಾಮಾನುಜನ್ ಆರ್ ಅವರ ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. Stallion of the sun and other stories’ – ಇದು ಹೆಗಡೆಯಾರು ಹೆಗಡೆಯವರು ಅನುವಾದಿಸಿರುವ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ. ಇದನ್ನು ‘ಪೆಂಗ್ವಿನ್’ ಪ್ರಕಾಶನವು ಪ್ರಕಟಿಸಿದೆ. ನಾರಾಯಣ ಹೆಗ್ಡೆಯವರು ಅನುವಾದಿಸಿರುವ, ವೆಂಕಟರಮಣ ಶಾಸ್ತ್ರಿಯವರ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ವನ್ನು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.

 Posted by at 4:09 PM
May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಪ್ರಧಾನ್ ಗುರುದತ್ ಅವರ ಕಿರುಪರಿಚಯ ಇಲ್ಲಿದೆ:-

 

ಪ್ರಧಾನ್ ಗುರುದತ್ತ (ಮೇ, ೩೦, ೧೯೩೮) ಅವರು ಅನುವಾದ ಸಾಹಿತ್ಯ ಪ್ರಕಾರದಲ್ಲಿ ಪ್ರಮುಖ ಹೆಸರು. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರಾದ, ಗುರುದತ್ತರು ಬಹುಭಾಷಾ ವಿದ್ವಾಂಸರು. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿಗಳ ಜೊತೆ ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿಯೂ ಪರಿಣತರು. ಗುರುದತ್ತ ಅವರು ಕನ್ನಡ, ಹಿಂದಿ ಭಾಷೆಗಳಲ್ಲಿ ಎಂ.ಎ. ‘ಅನುವಾದ’ವಿಷಯದಲ್ಲಿ ಡಾಕ್ಟರೇಟ್ ಪದವಿಗಳಿಸಿದ್ದಾರೆ. ಅನುವಾದವಲ್ಲದೆ, ಸ್ವತ: ಲೇಖಕರಾಗಿಯೂ, ಸಂಪಾದಕರಾಗಿಯೂ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಇವರ ಪುಸ್ತಕಗಳನ್ನು ಹಲವಾರು ಪ್ರಮುಖ ಪ್ರಕಾಶನಗಳು ಹೊರತಂದಿವೆ. ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವುದಲ್ಲದೆ, ೨೫೦ ಸಂಶೋಧನಾ ಲೇಖನಗಳಲ್ಲದೆ, ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.

ಬೋಧಕರಾಗಿಯೂ ಮೂರು ದಶಕಗಳ ಅಪಾರ ಅನುಭವ ಇವರದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕರಾಗಿಯಲ್ಲದೆ, ಕೆಲವು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಗುರುದತ್ ಅವರು ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ಗೌರವಗಳು ಸಲ್ಲಿಸಲಾಗಿದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’(೧೯೯೪), ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೨೦೦೩)’, ‘ಆರ್ಯಭಟ’ ‘ದೇಜಗೌ’ ಪ್ರಶಸ್ತಿಗಳೂ ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಗುರುದತ್ತರನ್ನು ಅರಸಿಬಂದಿವೆ.Pradhan Gurudatta-2

 Posted by at 12:04 PM
May 032015
 

ಕನ್ನಡ ಸಾಹಿತ್ಯ ರಂಗ ಈವರೆಗೆ, ಎರಡು ವರ್ಷಕ್ಕೊಂದರಂತೆ ಆರು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ಈಗ ಏಳನೆಯ ಸಮ್ಮೇಳನವನ್ನು ಸೈಂಟ್ ಲೂಯಿಸಿನಲ್ಲಿ ನಡೆಸಲು ಸಜ್ಜಾಗಿದೆ. ಈ ಸಮ್ಮೇಳನಗಳು ಹೇಗಿರುತ್ತವೆ? ಅಲ್ಲಿ ಏನೆಲ್ಲಾ ಕಾರ್ಯಕ್ರಮಗಳಿರುತ್ತವೆ? … ಈ ಬಗ್ಗೆ ತಿಳಿಯಲು ಮೀರಾ ಪಿ. ಆರ್ ಒಂದು ಮಾಹಿತಿಪೂರ್ಣವಾದ ವಿಡಿಯೊ ತಯಾರಿಸಿದ್ದಾರೆ.

 Posted by at 2:01 PM