ಕನ್ನಡ ಸಾಹಿತ್ಯರಂಗದ ಸಂಸ್ಥಾಪಕರಲ್ಲೊಬ್ಬರಾದ ಮತ್ತು ಕಸಾರಂ ನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ ಡಾ. ಎಚ್. ವೈ. ರಾಜಗೋಪಾಲ್ ಅವರು ಈ ದಿನ ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿ ದಿವಂಗತರಾದರೆಂದು ತಿಳಿಸಲು ತೀವ್ರ ವಿಷಾದವಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ ಪ್ರೇರಕ ಶಕ್ತಿಯಾಗಿದ್ದ ರಾಜಗೋಪಾಲ್ ಅವರನ್ನು ಕಳೆದುಕೊಂಡ ನೋವು ನಮ್ಮದು. ಕನ್ನಡ ಸಾಹಿತ್ಯ ರಂಗವು ಈ ಮೂಲಕ ಎಚ್.ವೈ .ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.
ಏಪ್ರಿಲ್ 2 ರ ಬೆಳಿಗ್ಗೆ University of Pennsylvania Main Hospital ನಲ್ಲಿ ನಿಧನರಾದ ರಾಜಗೋಪಾಲ್ ಅವರು ಪತ್ನಿ ವಿಮಲಾ ರಾಜಗೋಪಾಲ್, ಮಕ್ಕಳಾದ ಮಾಧವಿ ರಿಜ್ಜೊ, ರಾಮ್ ರಾಜಗೋಪಾಲ್, ಚೇತನಾ ಜೋಯ್ಸ್ ಮತ್ತು ಅಪಾರ ಕನ್ನಡ ಬಳಗವನ್ನು ಅಗಲಿದ್ದಾರೆ. ರಾಜಗೋಪಾಲ್ ಅವರ ಕುಟುಂಬಕ್ಕೆ ಸಾಂತ್ವನ, ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇವೆ! 🙏