ಆತ್ಮೀಯ ಸಹೃದಯರೆ,
ಪ್ರತಿಬಾರಿಯಂತೆ ಈ ಸಲವೂ ನಮ್ಮ ಹೆಮ್ಮೆಯ ಬರಹಗಾರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ಸಾಹಿತ್ಯಪ್ರಿಯರಿಗೆ ಏಪ್ರಿಲ್ ೩೦, ಮೇ ೧ ರಂದು ಕ್ಯಾಲಿಫೋರ್ನಿಯಾದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದ ಸಂದರ್ಭದಲ್ಲಿ ಪರಿಚಯ ಮಾಡಿಕೊಡಲು ನಾವು ಕಾತುರರಾಗಿದ್ದೇವೆ. ಕಳೆದ ಸಮ್ಮೇಳನದಿಂದೀಚೆಗೆ (೨೦೦೯ ಮೇ) ಪ್ರಕಟವಾಗಿರುವ ಅಮೆರಿಕದ ಬರಹಗಾರರು ಬರೆದ ಅಥವಾ ಸಂಪಾದಿಸಿದ ಹಲವು ಪುಸ್ತಕಗಳನ್ನು ಕನ್ನಡ ಸಾಹಿತ್ಯ ರಂಗ ಈಗಾಗಲೇ ಗುರುತಿಸಿದೆ. ಅವುಗಳಲ್ಲಿ ಎರಡು ಕಾದಂಬರಿಗಳು, ಒಂದು ಕಥಾಸಂಕಲನ, ಒಂದು ಮಕ್ಕಳ ಸಾಹಿತ್ಯ, ಒಂದು ವಿಮರ್ಶಾಗ್ರಂಥ, ಒಂದು ಅನುವಾದ, ಒಂದು ಸ್ಮರಣ ಗ್ರಂಥ ಸಹ ಇವೆ. ಇವೇ ಅಲ್ಲದೇ ಇನ್ನೂ ಮೂರು ಕಥಾಸಂಕಲನಗಳು ಮತ್ತೊಂದು ಅನುವಾದ ಕೂಡ ನಮ್ಮ ವಸಂತ ಸಾಹಿತ್ಯೋತ್ಸವದ ವೇಳೆಗೆ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಅವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನಿಮ್ಮೊಡನೆ ಹಂಚಿಕೊಳ್ಲಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಗಮನಕ್ಕೆ ಬಂದಿರದ, ಕಳೆದ ಎರಡುವರ್ಷಗಳಲ್ಲಿ ಪ್ರಕಟವಾದ ಅಮೆರಿಕದ ಕನ್ನಡಿಗರ ಕೃತಿಗಳಿದ್ದಲ್ಲಿ, ಅವುಗಳನ್ನು ಅದರ ಲೇಖಕರಾಗಲೀ ಅವರ ಪ್ರತಿನಿಧಿಗಳಾಗಲೀ ಪರಿಚಯಮಾಡಿಕೊಡುವ ಅಭಿಪ್ರಾಯಹೊಂದಿದ್ದಲ್ಲಿ, ಅಂಥವರು ಈ ಕೆಳಕಂಡವರನ್ನು ದಯಮಾಡಿ ಕೂಡಲೇ (೨೦೧೧ ಏಪ್ರಿಲ್ ೨ರ ಮುನ್ನ) ಸಂಪರ್ಕಿಸಬೇಕೆಂದು ಕೋರಿಕೆ. ಹಾಗೇ ಕೃತಿಗಳ ಬಗ್ಗೆ ಸೂಕ್ಷ್ಮ ಪರಿಚಯವನ್ನೂ ಕಳುಹಿಸಿದಲ್ಲಿ, ನಮ್ಮ ಗೋಷ್ಠಿಯನ್ನು ಯೋಜಿಸಲು ತುಂಬಾ ಸಹಾಯವಾಗುತ್ತದೆ
ಮೈ ಶ್ರೀ ನಟರಾಜ mysreena@aol.com
ಮಧು ಕೃಷ್ಣಮೂರ್ತಿ madhukanthk@yahoo.com