Apr 202015
 

candle1

 

ಹಿರಿಯ ಅಮೆರಿಕನ್ನಡಿಗ ವೈ.ಆರ್.ಮೋಹನ್ ಅವರು ಟಸ್ಕಲೂಸಾ ಅಲಬಾಮದಲ್ಲಿ ಏಪ್ರಿಲ್,20, 2015ರ ಸಂಜೆ ನಿಧನರಾದರು. ಹಲವಾರು ವರ್ಷಗಳಿಂದ ಮೋಹನ್ ಅವರು ‘ಪಾರ್ಕಿನ್ಸನ್’ ಕಾಯಿಲೆಯಿಂದ ಬಳಲುತ್ತಿದ್ದರು. ‘ನೆನಪುಗಳು’ ಇದು ಮೋಹನ್ ಅವರ ಆತ್ಮಚರಿತ್ರೆ. ಇದರಲ್ಲಿ ‘ಪಾರ್ಕಿನ್ಸನ್’ನೊಂದಿಗಿನ ತಮ್ಮ ಹೋರಾಟವನ್ನು ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅವರ “ನೆನಪುಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಇದು ಅಮೆರಿಕನ್ನಡಿಗ ಬರಹಗಾರರಿಗೆ ಸಂದ ಮೊದಲ ಪ್ರಶಸ್ತಿಯಾಗಿದೆ.

“ಅಮೆರಿಕಾಯಣ” ಅವರ ಇನ್ನೊಂದು ಕೃತಿ. ಕಾಯಿಲೆಯಿಂದ ನರಳುತ್ತಿದ್ದರೂ, ಇತ್ತೀಚೆಗೆ ಕೆಲವು ಇಂಗ್ಲಿಷ್ ಕೃತಿಯನ್ನು ಕೂಡ ರಚಿಸಿದ್ದರು. ಅಲಬಾಮಾ ಯುನಿವರ್ಸಿಟಿಯಲ್ಲಿ ಸಮಾಜಶಾಸ್ತ್ರದ ಪ್ರಧ್ಯಾಪಕರಾಗಿದ್ದ ಮೋಹನ್ ಅವರು “ಸಹ್ಯಾದ್ರಿ” ಕನ್ನಡ ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡ ಸಾಹಿತ್ಯ ರಂಗದ ಪ್ರಕಟನೆಗಳಲ್ಲಿಯೂ ಮೋಹನ್ ಅವರ ಲೇಖನಗಳು ಪ್ರಕಟವಾಗಿವೆ.
ಮೋಹನ್ ಅವರ ನಿಧನಕ್ಕಾಗಿ ಕನ್ನಡ ಸಾಹಿತ್ಯ ರಂಗವು ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

 Posted by at 11:06 PM