Apr 162019
 
ಸಾಹಿತ್ಯ ಪ್ರೇಮಿ ಕನ್ನಡಿಗರಿಗೆಲ್ಲರಿಗೂ ನಮಸ್ಕಾರಗಳು . ನಿಮ್ಮೆಲ್ಲರಿಗೂ  ‘ವಿಕಾರಿ’ ಸಂವತ್ಸರದ ಶುಭಾಶಯಗಳು!
ಕನ್ನಡ ಸಾಹಿತ್ಯ ರಂಗ ಮತ್ತು ‘ತ್ರಿವೇಣಿ’ ಕನ್ನಡ ಬಳಗದ ಸಹಕಾರದೊಂದಿಗೆ, ನ್ಯೂಜೆರ್ಸಿಯ ‘ಮಾರ್ಲ್‌ಟನ್’ನಲ್ಲಿ, ಮೇ ತಿಂಗಳ ೧೮ ಮತ್ತು ೧೯ರಂದು ನಡೆಯುತ್ತಿರುವ ಸಾಹಿತ್ಯ ಹಬ್ಬದ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇದೆ.  ಸಮ್ಮೇಳನಕ್ಕಾಗಿ ನೋಂದಾಯಿಸಿಕೊಂಡಿಲ್ಲವಾದರೆ,  ನೋಂದಣೆ ಮಾಡಿಕೊಳ್ಳಿ. ಈಗ  ಆನ್‍ಲೈನ್ ಮೂಲಕ ನೋಂದಾಯಿಸುವ ವ್ಯವಸ್ಥೆಯಾಗಿದೆ. 
ಈ ಸಮ್ಮೇಳನದ ಮುಖ್ಯ ಆಕರ್ಷಣೆಗಳಲ್ಲೊಂದು   ‘ಸಾಹಿತ್ಯ ಗೋಷ್ಠಿ’. ನಮ್ಮ ಸುತ್ತಮುತ್ತಲೂ ಇರುವ   ಕವಿ, ಸಾಹಿತಿ, ಬರಹಗಾರರ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ. ಬರೆಯುವ ಹವ್ಯಾಸವಿರುವವರು, ತಮ್ಮ ಸ್ವರಚಿತ ಕವನ, ಪ್ರಬಂಧ, ಹಾಸ್ಯ ಲೇಖನ, ಚುಟುಕುಗಳನ್ನು ಸಭಿಕರೆದುರಿಗೆ ಪ್ರಸ್ತುತಪಡಿಸಲು ಇದೊಂದು ಸುವರ್ಣಾವಕಾಶ!
*ಗದ್ಯ, ಪದ್ಯ ಯಾವುದೇ ಪ್ರಕಾರವಾದರೂ ಪ್ರಸ್ತುತಪಡಿಸಬಹುದು. ಆದರೆ, ಅದು ನಿಮ್ಮ ಸ್ವಂತದ ರಚನೆಯಾಗಿರಬೇಕು.
* ಕವಿತೆಗೆ ಐದು ನಿಮಿಷ, ಗದ್ಯ ಬರಹವಾದರೆ ಏಳು ನಿಮಿಷಗಳ ಮಿತಿ ಇರುತ್ತದೆ.
‘ಸಾಹಿತ್ಯಗೋಷ್ಠಿ’ಯ ವೇದಿಕೆ ನಿಮ್ಮನ್ನು ಎದುರುಗೊಳ್ಳಲು ಕಾಯುತ್ತಿದೆ.  ನಿಮ್ಮ ಕವನ, ಪ್ರಬಂಧ ಅಥವಾ ಬೇರೆ ಯಾವುದೇ ಕೃತಿಯನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಅವರ ಮನಸೂರೆಗೊಳ್ಳುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರೆಂಬುದು ನಮ್ಮ ಕಳಕಳಿಯ ಕೋರಿಕೆ. ನಿಮ್ಮ ಭಾಗವಹಿಸುವಿಕೆಯನ್ನು ಆದಷ್ಟು ಬೇಗ ಖಚಿತಪಡಿಸಿ.  ಇಮೈಲ್ ವಿಳಾಸ : ksrnews@gmail.com
ನಿಮ್ಮ ಬರಹಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ ಮೇ, ೧,೨೦೧೯
ನಿಮ್ಮ ಪ್ರಸ್ತುತಿಗಳನ್ನು ಕಳಿಸಬೇಕಾದ ಇಮೈಲ್ ವಿಳಾಸ   ksrnews@gmail.com
ಹೆಚ್ಚಿನ ವಿವರಗಳಿಗಾಗಿ  ಸಂಪರ್ಕಿಸಿ : ತ್ರಿವೇಣಿ ಶ್ರೀನಿವಾಸರಾವ್, ಇಮೈಲ್ ವಿಳಾಸ:
*ಕಾರ್ಯಕ್ರಮದ ವಿನ್ಯಾಸ, ರೂಪರೇಷೆಗಳ ಬಗೆಗಿನ ಅಂತಿಮ ನಿರ್ಧಾರ ಕನ್ನಡ ಸಾಹಿತ್ಯ ರಂಗದ ನಿರ್ವಾಹಕರದು!’  


– ಕನ್ನಡ ಸಾಹಿತ್ಯ ರಂಗ

 

 Posted by at 7:26 PM