admin

Apr 202015
 

candle1

 

ಹಿರಿಯ ಅಮೆರಿಕನ್ನಡಿಗ ವೈ.ಆರ್.ಮೋಹನ್ ಅವರು ಟಸ್ಕಲೂಸಾ ಅಲಬಾಮದಲ್ಲಿ ಏಪ್ರಿಲ್,20, 2015ರ ಸಂಜೆ ನಿಧನರಾದರು. ಹಲವಾರು ವರ್ಷಗಳಿಂದ ಮೋಹನ್ ಅವರು ‘ಪಾರ್ಕಿನ್ಸನ್’ ಕಾಯಿಲೆಯಿಂದ ಬಳಲುತ್ತಿದ್ದರು. ‘ನೆನಪುಗಳು’ ಇದು ಮೋಹನ್ ಅವರ ಆತ್ಮಚರಿತ್ರೆ. ಇದರಲ್ಲಿ ‘ಪಾರ್ಕಿನ್ಸನ್’ನೊಂದಿಗಿನ ತಮ್ಮ ಹೋರಾಟವನ್ನು ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಅವರ “ನೆನಪುಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಇದು ಅಮೆರಿಕನ್ನಡಿಗ ಬರಹಗಾರರಿಗೆ ಸಂದ ಮೊದಲ ಪ್ರಶಸ್ತಿಯಾಗಿದೆ.

“ಅಮೆರಿಕಾಯಣ” ಅವರ ಇನ್ನೊಂದು ಕೃತಿ. ಕಾಯಿಲೆಯಿಂದ ನರಳುತ್ತಿದ್ದರೂ, ಇತ್ತೀಚೆಗೆ ಕೆಲವು ಇಂಗ್ಲಿಷ್ ಕೃತಿಯನ್ನು ಕೂಡ ರಚಿಸಿದ್ದರು. ಅಲಬಾಮಾ ಯುನಿವರ್ಸಿಟಿಯಲ್ಲಿ ಸಮಾಜಶಾಸ್ತ್ರದ ಪ್ರಧ್ಯಾಪಕರಾಗಿದ್ದ ಮೋಹನ್ ಅವರು “ಸಹ್ಯಾದ್ರಿ” ಕನ್ನಡ ಕೂಟದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕನ್ನಡ ಸಾಹಿತ್ಯ ರಂಗದ ಪ್ರಕಟನೆಗಳಲ್ಲಿಯೂ ಮೋಹನ್ ಅವರ ಲೇಖನಗಳು ಪ್ರಕಟವಾಗಿವೆ.
ಮೋಹನ್ ಅವರ ನಿಧನಕ್ಕಾಗಿ ಕನ್ನಡ ಸಾಹಿತ್ಯ ರಂಗವು ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

 Posted by at 11:06 PM
Apr 062015
 
ನಮಸ್ಕಾರ!
ಪ್ರತಿಸಲದಂತೆ ಈ ಬಾರಿಯೂ ಕನ್ನಡ ಸಾಹಿತ್ಯ ರಂಗದ ಸಮ್ಮೇಳನದಲ್ಲಿ ಅಮೆರಿಕನ್ನಡಿಗ ಬರಹಗಾರರ ಪರಿಚಯ ಕಾರ್ಯಕ್ರಮವಿದೆ. ಅದಕ್ಕಾಗಿ ನಿಮ್ಮ ಪುಸ್ತಕಗಳನ್ನು ಕಳಿಸಿಕೊಡಲು ಕೋರಲಾಗಿದೆ.
ಲೇಖಕರ ಗಮನಕ್ಕೆ : ಕನ್ನಡದಿಂದ ಅನ್ಯ ಭಾಷೆಗಳಿಗೆ ಅನುವಾದಗೊಂಡ ಅಥವಾ ಅನ್ಯ ಬಾಷೆಯಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳಿಗೆ ಮನ್ನಣೆ. ಪುಸ್ತಕವು ಕಥೆ, ಕವಿತೆ, ವಿಜ್ಞಾನ, ಅನುವಾದ, ಮಕ್ಕಳ ಸಾಹಿತ್ಯ ಮುಂತಾದ ಯಾವುದೇ ಪ್ರಕಾರಗಳಿಗೆ ಸೇರಿರಬಹುದು.
– ಪುಸ್ತಕಗಳು 2013ರ ನಂತರ ಪ್ರಕಟಗೊಂಡಿರಬೇಕು.
 – ಈ ಮೊದಲು ಅಮೆರಿಕಾದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಕೃತಿಗಳನ್ನು ಮಾತ್ರ ಸಮ್ಮೇಳನದಲ್ಲಿ ಬಿಡುಗಡೆ ಮಾಡುವ ಅವಕಾಶ ಒದಗಿಸಲಾಗುವುದು. 
– ಪುಸ್ತಕ ಬಿಡುಗಡೆ, ವಿಮರ್ಶೆಯನ್ನು ಅಪೇಕ್ಷಿಸುವ ಲೇಖಕರು ಸಮ್ಮೇಳನದಲ್ಲಿ ಉಪಸ್ಥಿತರಿರತಕ್ಕದ್ದು.
 – ಪುಸ್ತಕ ಬಿಡುಗಡೆ/ವಿಮರ್ಶೆಗೆ ಆಯ್ಕೆ ಮಾಡುವುದರಲ್ಲಿ ಕಸಾರಂ ತೀರ್ಮಾನವೇ ಅಂತಿಮ. – ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಲೇಖಕರು ಏಪ್ರಿಲ್ 25ರ ಒಳಗೆ ಸಂಪರ್ಕಿಸಬೇಕು. – 
ಸಂಪರ್ಕ ವಿಳಾಸ  sritri@gmail.com, bhameera@gmail.com
 Posted by at 3:52 PM
Mar 302015
 

write_imageಕನ್ನಡ ಸಾಹಿತ್ಯಕ್ಕೆಂದೇ ಮೀಸಲಾದ ಅಮೆರಿಕಾದ ಏಕೈಕ ರಾಷ್ಟ್ರೀಯ ಸಂಸ್ಥೆ ‘ಕನ್ನಡ ಸಾಹಿತ್ಯ ರಂಗ’ವು ಬರುವ ಮೇ ೩೦ ಮತ್ತು ೩೧ರಂದು ತನ್ನ ಏಳನೆಯ ಸಾಹಿತ್ಯೋತ್ಸವವನ್ನು ಸೈಂಟ್ ಲೂಯಿಸ್ ನಲ್ಲಿ ಮಿಸ್ಸೌರಿ ಕನ್ನಡಿಗರ ಆಶ್ರಯದಲ್ಲಿ ಆಚರಿಸುತ್ತಿದೆ. ಸ್ಥಳೀಯ ಕನ್ನಡ ಸಂಸ್ಥೆಯಾದ ’ಸಂಗಮ’ ಈ ಸಂಘಟನೆಯಲ್ಲಿ ಸಹ ಪ್ರವರ್ತಕ ಪಾತ್ರವನ್ನು ವಹಿಸುತ್ತಿದೆ. ಹಾಗೂ ಮಧ್ಯ ಪಶ್ಚಿಮ ವಲಯದ ಇತರ ಕನ್ನಡ ಸಂಘಗಳು ತುಂಬು ಹೃದಯದಿಂದ ತಮ್ಮ ಸಹಕಾರ ಹಸ್ತವನ್ನು ಚಾಚುತ್ತಿವೆ. ಚೆಸ್ಟರ್ ಫೀಲ್ಡ್, ಮಿಸ್ಸೌರಿಯಲ್ಲಿರುವ ಮಾರ್ಕೆ ಶಾಲೆಯ ಸಭಾಂಗಣದಲ್ಲಿ ಈ ಸಮಾರಂಭದ ಅಂಗವಾಗಿ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ನಿಮ್ಮ ಕೃತಿಗಳನ್ನು ಓದಲು ಇಲ್ಲಿದೆ ಪ್ರೀತಿಯ ಕರೆಯೋಲೆ. ಅನುವಾದಿತ ಕವನಗಳಿಗೆ ಆದ್ಯತೆ ನೀಡಲಾಗುತ್ತದೆ.

‘ಸಾಹಿತ್ಯ ಗೋಷ್ಠಿ’ಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ವಿನಂತಿ:

ಪ್ರತಿಯೊಬ್ಬರಿಗೂ ಅನುವಾದಿತ ಕವನಗಳಿಗೆ ಎಂಟು ನಿಮಿಷ ಕಾಲಾವಕಾಶ (ಮೂಲ ಮತ್ತು ಅನುವಾದಿತ ಕವನ) ನೀಡಲಾಗುತ್ತದೆ.

ಕವನ ವಾಚನಕ್ಕೆ ಐದು ನಿಮಿಷ ಮತ್ತು ಗದ್ಯ ವಾಚನಕ್ಕೆ ಏಳು ನಿಮಿಷ ಕಾಲಾವಕಾಶ ನೀಡಲಾಗುತ್ತದೆ.

ನಿಮ್ಮ ರಚನೆಯನ್ನು ನೀವೇ ಓದಬೇಕು.

ನೀವು ಓದಬೇಕೆಂದಿರುವ ಕೃತಿಯನ್ನು ಮುಂಚಿತವಾಗಿ ‘ಬರಹ’ ಅಥವಾ ಕನ್ನಡ ಯುನಿಕೋಡ್ ನಲ್ಲಿ ಟೈಪ್ ಮಾಡಿ ಕಳಿಸಿಕೊಡಿ.

ನಿಮ್ಮ ರಚನೆಯನ್ನು ಕಳಿಸಲು ಕೊನೆಯ ದಿನಾಂಕ ಮೇ ೩.

ಸಾಹಿತ್ಯ ಗೋಷ್ಠಿಯಲ್ಲಿ ಪ್ರಸ್ತುತಿಯ ಆಯ್ಕೆಯ ಬಗ್ಗೆ ನಮ್ಮ ನಿರ್ಧಾರವೇ ಅಂತಿಮ.

ನಿಮ್ಮ ರಚನೆಯನ್ನು ಈ ಕೆಳಕಂಡ ವಿಳಾಸಕ್ಕೆ ಕಳಿಸಿಕೊಡಿ.

vaishalimadhu@gmail.com

 Posted by at 8:27 PM