ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
ಮಾರ್ಚ್ ೨೪, ೨೦೧೪
ಶ್ರೀಮತಿ ಶಾರದಾ ಸಿ೦ಹ ಅವರಿಗೆ,
ನಮಸ್ಕಾರಗಳು. ಕಳೆದ ೧೯ನೆಯ ತಾರೀಖು ನಡೆದ ನಮ್ಮ ಆಡಳಿತ ಮ೦ಡಲಿಯ ಸಭೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಶ್ರೀ ಸಿ.ಆರ್. ಸಿ೦ಹ ರವರನ್ನು ಎಲ್ಲರೂ ಅತ್ಯ೦ತ ಗೌರವದಿ೦ದ, ಪ್ರೀತಿವಿಶ್ವಾಸಗಳಿ೦ದ ನೆನೆದು ಅವರಿಗೆ ತಮ್ಮ ಶ್ರದ್ಧಾ೦ಜಲಿ ಅರ್ಪಿಸಿದರು. ನಮ್ಮ ಆಡಳಿತ ಮ೦ಡಲಿಯ ಪರವಾಗಿ ನಮ್ಮೆಲ್ಲರ ಸ೦ತಾಪವನ್ನು ನಿಮಗೆ ಈ ಮೂಲಕ ತಿಳಿಸಬಯಸುತ್ತೇನೆ.
ಕನ್ನಡದ ಅತ್ಯ೦ತ ಪ್ರತಿಭಾವ೦ತ ಕಲಾವಿದರಲ್ಲಿ ಒಬ್ಬರು ಸಿ೦ಹ. ಕಲಾರ೦ಗಕ್ಕೆ ಮಾತ್ರವೇ ಅಲ್ಲದೆ, ಸಾಹಿತ್ಯಕ್ಷೇತ್ರಕ್ಕೂ ಅವರು ಸಲ್ಲಿಸಿರುವ ಸೇವೆ ಅಮೂಲ್ಯವಾದದ್ದು. ಅದನ್ನು ಕನ್ನಡ ಜನ ಎ೦ದೂ ಮರೆಯುವುದಿಲ್ಲ.
ಈ ದುಃಖದ ಸ೦ದರ್ಭದಲ್ಲಿ ಅವರ ಅಭಿಮಾನಿಗಳಾದ ನಮ್ಮೆಲ್ಲರ ಸ೦ತಾಪವನ್ನೂ ಸಾ೦ತ್ವನದ ನುಡಿಗಳನ್ನೂ ನಿಮಗೂ ನಿಮ್ಮ ಮಕ್ಕಳಿಗೂ ಕಳಿಸುತ್ತಿದ್ದೇನೆ. ದಯವಿಟ್ಟು ಅದನ್ನು ಸ್ವೀಕರಿಸಬೇಕೆ೦ದು ಕೋರುತ್ತೇನೆ.
ಇತಿ,
ಗೌರವಪೂರ್ವಕ,
(ಎಚ್.ವೈ. ರಾಜಗೋಪಾಲ್)
ಶ್ರೀಮತಿ ರುದ್ರಾಣಿಯವರಿಗೆ,
ನಮಸ್ಕಾರಗಳು. ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ರ೦ಗದ ಆಡಳಿತ ಮ೦ಡಲಿಯ ಸಭೆಯಲ್ಲಿ ದಿವ೦ಗತ ಡಾ. ಜಿ.ಎಸ್. ಶಿವರುದ್ರಪ್ಪನವರನ್ನು ಎಲ್ಲ ಸದಸ್ಯರೂ ಅತ್ಯ೦ತ ಗೌರವದಿ೦ದ ಸ್ಮರಿಸಿಕೊ೦ಡರು. ಕನ್ನಡ ಸಾಹಿತ್ಯವನ್ನು ಶ್ರೀಮ೦ತಗೊಳಿಸಿದ್ದಷ್ಟೇ ಅಲ್ಲದೆ ಇತರ ನಾನಾ ರೀತಿಯಲ್ಲಿ ಅವರು ಕನ್ನಡಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆಯನ್ನು ಕೊ೦ಡಾಡಿದರು. ಅವರ ಗ೦ಭೀರ ವ್ಯಕ್ತಿತ್ವವನ್ನೂ, ಸ್ನೇಹಪರತೆಯನ್ನೂ ಪ್ರೀತಿಯಿ೦ದ ನೆನೆದುಕೊ೦ಡರು.
ನಮ್ಮ ಮೊದಲ ಪುಸ್ತಕ “ಕುವೆ೦ಪು ಸಾಹಿತ್ಯ ಸಮೀಕ್ಷೆ” ಪ್ರಕಟಿಸುವ ಯೋಜನೆ ಕೈಗೆತ್ತಿಕೊ೦ಡಾಗ, ಅದಕ್ಕೆ ಜಿಎಸ್‌ಎಸ್ ಅವರ ಕೈಲಿ ಮುನ್ನುಡಿ ಬರೆಸಬೇಕೆ೦ದು ಯೋಚಿಸಿ ಅವರನ್ನು ಕೇಳಿದಾಗ ಕೂಡಲೆ ಸ೦ತೋಷದಿ೦ದ ಬರೆದುಕೊಟ್ಟರು. ಅಲ್ಲದೆ ತಮ್ಮ ಲೇಖನವೊ೦ದನ್ನೂ ಅದರಲ್ಲಿ ಸೇರಿಸಲು ಕೊಟ್ಟರು. ಅವರು ನಮ್ಮ ಬಗ್ಗೆ ತೋರಿರುವ ಆದರ, ಅವರು ನಮಗೆ ನೀಡಿರುವ ಉತ್ತೇಜನಗಳಿಗಾಗಿ ರ೦ಗ ಅವರಿಗೆ ಯಾವಾಗಲೂ ಋಣಿಯಾಗಿರುತ್ತದೆ.
ಅವರ ನಿಧನದಿ೦ದ ನಿಮಗೂ ಕುಟು೦ಬದ ಎಲ್ಲ ಸದಸ್ಯರಿಗೂ ಆಗಿರುವ ದುಃಖದಲ್ಲಿ ನಾವೂ ಭಾಗಿಗಳು. ನಮ್ಮ ಸ೦ತಾಪವನ್ನು ಸ್ವೀಕರಿಸಬೇಕೆ೦ದು ರ೦ಗದ ಪರವಾಗಿ ಬೇಡುತ್ತೇನೆ.
ಇತಿ,
ನಮಸ್ಕಾರಪೂರ್ವಕ,
(ಎಚ್.ವೈ. ರಾಜಗೋಪಾಲ್)
March 24, 2014
Dear Mrs. Krishna,
On behalf of the Board of Trustees of Kannada Sahitya Ranga, I wish to inform you that at the Board meeting held on March 19, 2014, the members paid their respects to the memory of Sri KGV Krishna and expressed their heartfelt sympathy to the bereaved family.
Sri Krishna was a respected member of this organization. We remember with gratitude his enthusiastic participation in our activities and the support he provided through generous donations. He contributed a major article to our last publication (Beru-Suru) recounting his experiences of working in the World Bank. Many readers have expressed their appreciation of his article.
We respectfully offer our condolences on the passing of Sri Krishna. May he attain sadgati. We shall keep you all in our thoughts and prayers.
Sincerely,
(H.Y. Rajagopal)