ಕನ್ನಡ ಸಾಹಿತ್ಯ ರ೦ಗದ ಒಂಭತ್ತನೆಯ ವಸಂತ ಸಾಹಿತ್ಯೋತ್ಸವ
ಆತ್ಮೀಯರೆ,
ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆ `ಕನ್ನಡ ಸಾಹಿತ್ಯ ರ೦ಗ’ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಸುವ ‘ವಸಂತ ಸಾಹಿತ್ಯೋತ್ಸವ’ ಅಮೆರಿಕಾದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರಿಗೆಲ್ಲ ಚಿರಪರಿಚಿತ. ಕಸಾರಂ ಈಗಾಗಲೇ ಎಂಟು ಸಾಹಿತ್ಯ ಸಮ್ಮೇಳನಗಳನ್ನು ಅಮೆರಿಕಾದ ವಿವಿದೆಡೆಗಳಲ್ಲಿ ಯಶಸ್ವಿಯಾಗಿ ನಡೆಸಿ ಈ ವರ್ಷ ಒಂಭತ್ತನೆಯ ಸಮ್ಮೇಳನವನ್ನು ನಡೆಸಲು ಸಿದ್ಧವಾಗಿದೆ. ಇದೇ ಮೇ ೧೮-೧೯ರಂದು ನ್ಯೂ ಜೆರ್ಸಿಯಲ್ಲಿ `ತ್ರಿವೇಣಿ’ ಕನ್ನಡ ಕೂಟದ ಸಹಯೋಗದಲ್ಲಿ ಸಮ್ಮೇಳನ ನಡೆಯಲಿದೆ. ಕನ್ನಡದ ಪ್ರಸಿದ್ಧ ಲೇಖಕ, ಪ್ರಕಾಶಕ ವಸುಧೇಂದ್ರ ಅವರು ಈ ಸಮ್ಮೇಳನದ ಮುಖ್ಯ ಅಥಿತಿಯಾಗಿ ಆಗಮಿಸಲಿದ್ದಾರೆ. ಹೆಚ್ಚಿನ ವಿವರಗಳಿಗೆ
www.kannadasahityaranga.org ತಾಣವನ್
ನು ನೋಡಿ.
ಈ ಸಮ್ಮೇಳನದಲ್ಲಿ ಪ್ರತಿಬಾರಿಯಂತೆ ಈ ಸಲವೂ ಅಮೆರಿಕದ ಕನ್ನಡ ಬರಹಗಾರರನ್ನು ಮತ್ತು ಅವರ ಇತ್ತೀಚಿನ ಕೃತಿಗಳನ್ನು ‘ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಸಾಹಿತ್ಯಪ್ರಿಯರಿಗೆ ಪರಿಚಯ ಮಾಡಿಕೊಡಲು ನಾವು ಉತ್ಸುಕರಾಗಿದ್ದೇವೆ. ಲೇಖಕರು ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವೂ ಉಂಟು.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಕೆಲವು ನಿಯಮಗಳು ಹೀಗಿವೆ:
– ಕನ್ನಡದ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಗೊಂಡಿರುವ ಪುಸ್ತಕಗಳೂ ಆಗಬಹುದು. ಪುಸ್ತಕವು ಸಾಹಿತ್ಯ, ವಿಜ್ಞಾನ, ಪರಿಸರ, ಆರೋಗ್ಯ, ಅನುವಾದ, ಮಕ್ಕಳ ಸಾಹಿತ್ಯ.. ಹೀಗೆ ಯಾವುದೇ ಪ್ರಕಾರಕ್ಕೂ ಸೇರಿದ್ದಾಗಿರಬಹುದು.
– ಪುಸ್ತಕಗಳು ೨೦೧೭ರ ಏಪ್ರಿಲ್ ತಿಂಗಳ ನಂತರ ಪ್ರಕಟಗೊಂಡಿದ್ದಾಗಿರಬೇಕು.
– ಈ ಮೊದಲು ಅಮೆರಿಕದಲ್ಲಿ ಎಲ್ಲಿಯೂ ಬಿಡುಗಡೆಯಾಗಿರದ ಪುಸ್ತಕಗಳನ್ನು ಮಾತ್ರ ಸಮ್ಮೇಳನದಲ್ಲಿ ಬಿಡುಗಡೆಗೆ ಮಾಡುವ ಅವಕಾಶ ಒದಗಿಸಲಾಗುವುದು.
– ಪುಸ್ತಕಗಳ ಬಿಡುಗಡೆ ಮತ್ತು ಪರಿಚಯವನ್ನು ಅಪೇಕ್ಷಿಸುವ ಲೇಖಕರು ಮತ್ತು ಪುಸ್ತಕವನ್ನು ಕಾರ್ಯಕ್ರಮದಲ್ಲಿ ಪರಿಚಯಿಸುವವರು ಸಮ್ಮೇಳನಕ್ಕೆ ನೊಂದಾಯಿಸಿಕೊಂಡು, ಉಪಸ್ಥಿತರಿರಬೇಕು.
– ಪುಸ್ತಕ ಬಿಡುಗಡೆ/ಪರಿಚಯದ ಆಯ್ಕೆಯಲ್ಲಿ ಕಸಾರಂ ತೀರ್ಮಾನ ಅಂತಿಮ.
– ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಛಿಸುವ ಲೇಖಕರು ಏಪ್ರಿಲ್ 25ರ ಒಳಗೆ ನಮ್ಮನ್ನು ಸಂಪರ್ಕಿಸಿ, ನಿಮ್ಮ ಕೃತಿಗಳ ಒಂದು ಕಾಪಿಯನ್ನು ಪುಸ್ತಕ ಪರಿಚಯ ಮಾಡಿಕೊಡುವವರಿಗೂ ಇನ್ನೊಂದು ಕಾಪಿಯನ್ನು ಕಾರ್ಯಕ್ರಮವನ್ನು ನಿರ್ವಹಿಸುತ್ತಿರುವ ಮೀರಾ ರಾಜಗೋಪಾಲ್ ಅವರಿಗೂ ಕಳುಹಿಸಿಕೊಡಬೇಕು.
– ಪರಿಚಯಿಸಲ್ಪಟ್ಟ ಪುಸ್ತಕಗಳನ್ನು ಕಸಾರಂ ಪುಸ್ತಕ ಮಳಿಗೆಯಲ್ಲಿ ಮೇ ೧೮-೧೯ರಂದು ಮಾರಲು ಅವಕಾಶವಿರುತ್ತದೆ.
-ಪುಸ್ತಕಗಳನ್ನು ಮಾರುವ ಜವಾಬ್ದಾರಿ ಲೇಖಕರಿಗೇ ಸೇರಿದ್ದು.
ಮಳಿಗೆಯಲ್ಲಿ ಇತರ ಲೇಖಕರಿಗೆ ಮತ್ತು ಕಾರ್ಯಕ್ರಮಕ್ಕೆ ತೊಂದರೆಯಾಗದ ರೀತಿಯಲ್ಲಿ ಮಾರಾಟ ನಡೆಸಬೇಕು.
ಹೆಚ್ಚಿನ ವಿವರಗಳಿಗೆ ಮೀರಾ ರಾಜಗೋಪಲ್ ಅವರನ್ನು ಸಂಪರ್ಕಿಸಿ
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸ೦ಖ್ಯೆಯಲ್ಲಿ ‘ವಸಂತ ಸಾಹಿತ್ಯೋತ್ಸವ’ದಲ್ಲಿ ಪಾಲ್ಗೊಂಡು ಸಮ್ಮೇಳನದ ಸಂಭ್ರಮ ಹೆಚ್ಚಿಸಬೇಕೆಂದು ಕೋರುತ್ತಿದ್ದೇವೆ.
ಈ ಕುರಿತಂತೆ ಹೆಚ್ಚಿನ ವಿವರಗಳು ಬೇಕಿದ್ದರೆ ದಯವಿಟ್ಟು ನಮ್ಮನ್ನು ಸ೦ಪರ್ಕಿಸಿ.
ವಿಶ್ವಾಸಪೂರ್ವಕವಾಗಿ,
ಕನ್ನಡ ಸಾಹಿತ್ಯ ರಂಗ