ಸಾಹಿತ್ಯ ಪ್ರೇಮಿ ಕನ್ನಡಿಗರಿಗೆಲ್ಲರಿಗೂ ನಮಸ್ಕಾರಗಳು
ಕನ್ನಡ ಸಾಹಿತ್ಯ ರಂಗವು ಮತ್ತು ‘ಡಲ್ಲಾಸ್ನ ಮಲ್ಲಿಗೆ ಕನ್ನಡ ಕೂಟದ ಸಹಯೋಗದೊಂದಿಗೆ, ಟೆಕ್ಸಸ್ ರಾಜ್ಯದ, ಗ್ರೇಪ್ ವೈನ್ ನಗರದ, ಗ್ರೇಪ್ ವೈನ್ ಸಭಾಂಗಣದಲ್ಲಿ, ಏಪ್ರಿಲ್ ತಿಂಗಳ 15,16,17ರಂದು ನಡೆಸುತ್ತಿರುವ ಸಾಹಿತ್ಯದ ಸುಗ್ಗಿ ಹಬ್ಬಕ್ಕೆ ನಿಮ್ಮೆಲ್ಲರಿಗೂ ಆದರದ ಸ್ವಾಗತ. ಸಮ್ಮೇಳನಕ್ಕೆ ನೋಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ವಿವರಗಳಿಗಾಗಿ ಈ ತಾಣಕ್ಕೆ ಭೇಟಿಕೊಡಿ.
‘ಬರೆದಿದ್ದಾss ತನ್ನಿ – ಓದಾನಾss ಬನ್ನಿ..!! ’ ಇದು ಬರಹಗಾರರ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆ. ಸ್ವರಚಿತ ಕವನ, ಪ್ರಬಂಧ, ಹಾಸ್ಯ ಲೇಖನ, ಚುಟುಕುಗಳನ್ನು ಸಭಿಕರೆದುರಿಗೆ ಪ್ರಸ್ತುತಪಡಿಸಲು ಇದೊಂದು ಸುವರ್ಣಾವಕಾಶ!!
* ಈ ಸಮ್ಮೇಳನದ ವಿಷಯ ‘ಜನಪದ’.ಎಂದಿರುವುದರಿಂದ ನಿಮ್ಮ ಪ್ರಸ್ತುತಿ ಆ ಬಗ್ಗೆ ಇದ್ದರೆ ಚೆನ್ನ.. ಆದರೆ ಕಡ್ಡಾಯವಲ್ಲ ವಿಷಯದ ಅಯ್ಕೆ ನಿಮ್ಮದು.
*ಗದ್ಯ, ಪದ್ಯ, ಹನಿಗವನ, ಯಾವುದೇ ಪ್ರಕಾರವಾದರೂ ಆಗಬಹುದು. ಆದರೆ, ಅದು ನಿಮ್ಮ ಸ್ವಂತದ ರಚನೆಯಾಗಿರಬೇಕು.
* ಗದ್ಯ ಬರಹಕ್ಕೆ ಐದು ನಿಮಿಷಗಳು, ಕವನಕ್ಕೆ ನಾಲ್ಕು ನಿಮಿಷಗಳ ಮಿತಿ ಇರುತ್ತದೆ.
‘ಸಾಹಿತ್ಯ ಸಂಭ್ರಮದ ಈ ವೇದಿಕೆ ನಿಮ್ಮನ್ನು ಎದುರುಗೊಳ್ಳಲು ಕಾತರದಿಂದ ಕಾಯುತ್ತಿದೆ. ನಿಮ್ಮ ಕವನ, ಪ್ರಬಂಧ, ಹನಿಗವನಗಳನ್ನು ಸಹೃದಯಿ ಪ್ರೇಕ್ಷಕರ ಸಮಕ್ಷಮದಲ್ಲಿ ಓದಿ, ಅವರ ಮನಸೂರೆಗೊಳ್ಳುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿರೆಂಬುದು ನಮ್ಮ ಕಳಕಳಿಯ ಕೋರಿಕೆ.
ನಿಮ್ಮ ಬರಹಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ ಮಾರ್ಚ್ 15, 2022
ಆಯ್ದ ಪ್ರಸ್ತುತಿಗಳ ಬಗ್ಗೆ, ಲೇಖಕರಿಗೆ ಮಾರ್ಚ್ 25ರ ಒಳಗೆ ತಿಳಿಸಲಾಗುತ್ತದೆ.
ನಿಮ್ಮ ಬರಹಗಳನ್ನು ಕಳಿಸಬೇಕಾದ ಇಮೈಲ್ ವಿಳಾಸ ksrsahithya2022@gmail.com