May 122015
 

ಕನ್ನಡ ಸಾಹಿತ್ಯ ರಂಗ ಭಾಷಣ ಮಾಲೆ

೧. ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ
– ಡಾ. ಪ್ರಭುಶಂಕರ (೨೦೦೪)

೨. ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ
– ಪ್ರೊ. ಬರಗೂರು ರಾಮಚಂದ್ರಪ್ಪ (೨೦೦೫)

೩. ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ
– ಪ್ರೊ. ಅ.ರಾ. ಮಿತ್ರ (೨೦೦೭)

೪. ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ
– ಡಾ. ವೀಣಾ ಶಾಂತೇಶ್ವರ (೨೦೦೯)

೫. ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ
– ಡಾ. ಸುಮತೀಂದ್ರ ನಾಡಿಗ (೨೦೧೧)

೬. ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು
– ಪ್ರೊ. ಕೆ.ವಿ. ತಿರುಮಲೇಶ್ (೨೦೧೩)

೭. ಅನುವಾದ/ಆಗುಹೋಗುಗಳು
– ಪ್ರಧಾನ್ ಗುರುದತ್ತ(೨೦೧೫)

 Posted by at 10:53 AM
May 112015
 

ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ನಾರಾಯಣ ಹೆಗಡೆ ಅವರ ಕಿರುಪರಿಚಯ ಇಲ್ಲಿದೆ:-

NH in St.Louis

 

ನಾರಾಯಣ ಹೆಗಡೆಯವರು ನ್ಯೂಯಾರ್ಕಿನ ‘ವೆಸ್ಟ್‍ಬೆರಿ’ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದಾರೆ. ಕನ್ನಡದ ಪ್ರಮುಖ ಲೇಖಕರಾದ ಯು. ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ, ಎ.ಕೆ ರಾಮಾನುಜನ್ ಆರ್ ಅವರ ಕತೆಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದಾರೆ. Stallion of the sun and other stories’ – ಇದು ಹೆಗಡೆಯಾರು ಹೆಗಡೆಯವರು ಅನುವಾದಿಸಿರುವ ಯು.ಆರ್.ಅನಂತಮೂರ್ತಿಯವರ ಕಥಾ ಸಂಕಲನ. ಇದನ್ನು ‘ಪೆಂಗ್ವಿನ್’ ಪ್ರಕಾಶನವು ಪ್ರಕಟಿಸಿದೆ. ನಾರಾಯಣ ಹೆಗ್ಡೆಯವರು ಅನುವಾದಿಸಿರುವ, ವೆಂಕಟರಮಣ ಶಾಸ್ತ್ರಿಯವರ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ವನ್ನು ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದೆ.

 Posted by at 4:09 PM
May 032015
 

ಕನ್ನಡ ಸಾಹಿತ್ಯ ರಂಗ ಈವರೆಗೆ, ಎರಡು ವರ್ಷಕ್ಕೊಂದರಂತೆ ಆರು ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿ, ಈಗ ಏಳನೆಯ ಸಮ್ಮೇಳನವನ್ನು ಸೈಂಟ್ ಲೂಯಿಸಿನಲ್ಲಿ ನಡೆಸಲು ಸಜ್ಜಾಗಿದೆ. ಈ ಸಮ್ಮೇಳನಗಳು ಹೇಗಿರುತ್ತವೆ? ಅಲ್ಲಿ ಏನೆಲ್ಲಾ ಕಾರ್ಯಕ್ರಮಗಳಿರುತ್ತವೆ? … ಈ ಬಗ್ಗೆ ತಿಳಿಯಲು ಮೀರಾ ಪಿ. ಆರ್ ಒಂದು ಮಾಹಿತಿಪೂರ್ಣವಾದ ವಿಡಿಯೊ ತಯಾರಿಸಿದ್ದಾರೆ.

 Posted by at 2:01 PM