ವೀಣಾ ಶಾಂತೇಶ್ವರ್ ಮತ್ತು ವೈದೇಹಿ
ವೀಣಾ ಶಾಂತೇಶ್ವರ್ ಮತ್ತು ವೈದೇಹಿ
ಮೇ, ೧೯ ಮತ್ತು ೨೦ರಂದು ಇಲಿನಾಯ್‌ನ ಅರೋರಾದಲ್ಲಿ ನಡೆದ ಮೂರನೆಯ ವಸಂತೋತ್ಸವ ಯಶಸ್ವಿಯಾಗಿ ನೆರವೇರಿತು. ಕನ್ನಡ ಸಾಹಿತ್ಯ ರಂಗ ಮತ್ತು ಇಲಿನಾಯ್ ವಿದ್ಯಾರಣ್ಯ ಕನ್ನಡ ಕೂಟದ ಸಹಯೋಗದೊಡನೆ ನಡೆದ ಸಮ್ಮೇಳನದಲ್ಲಿ, ಇಲಿನಾಯ್ ಮತ್ತು ಅಮೆರಿಕದ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅನೇಕ ಬರಹಗಾರರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.
ಸಮ್ಮೇಳನದ ಮೊದಲನೆಯ ದಿನವಾದ ೧೯ರಂದು “ನಗೆಗನ್ನಡಂ ಗೆಲ್ಗೆ” ಮತ್ತು “ಕನ್ನಡದಮರ ಚೇತನ” (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ” ಪುಸ್ತಕಗಳನ್ನು ಕ್ರಮವಾಗಿ ಪ್ರೊ. ಅ. ರಾ. ಮಿತ್ರ, ಡಾ. ಎಚ್. ಎಸ್. ರಾಘವೇಂದ್ರ ರಾವ್ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅ. ರಾ. ಮಿತ್ರರ ವಿದ್ಪತ್ಪೂರ್ಣ ಭಾಷಣ, ಎಚ್. ಎಸ್. ರಾಘವೇಂದ್ರ ರಾವ್ ಅವರಿಂದ “ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರಿಗೆ ಅಮೆರಿಕನ್ನಡಿಗರ ಅಭಿನಂದನೆ” ಕಾರ್ಯಕ್ರಮಗಳಲ್ಲದೆ, “ಅಮೆರಿಕದಲ್ಲಿ ಕನ್ನಡ ಕಲಿಕೆ”, “ನಮ್ಮ ಬರಹಗಾರರು” ಮುಂತಾದ ಪ್ರಸ್ತುತಿಗಳಿದ್ದವು. ಶಿಕರ ತಂಡ ನಡೆಸಿಕೊಟ್ಟ ಡಾ| ಚಂದ್ರಶೇಖರ ಕಂಬಾರರ “ಖರೋ ಖರ” ಸಭಿಕರ ಮನ ಗೆಲ್ಲುವಲ್ಲಿ ಸಫಲವಾಯಿತು.
ಎರಡನೆಯ ದಿನದ ಸಾಹಿತ್ಯ ಗೋಷ್ಟಿಯಲ್ಲಿ ಅಮೆರಿಕನ್ನಡಿಗ ಲೇಖಕರು ಸ್ವರಚಿತ ಕವನ, ನಗೆ ಬರಹ, ನಗೆಹನಿಗಳ ರಸದೌತಣವನ್ನು ಸಭಿಕರಿಗೆ ಉಣಬಡಿಸಿದರು. ತ್ರಿವೇಣಿ ಶ್ರೀನಿವಾಸರಾವ್ ಅವರ “ತುಳಸೀವನ” ಅಂಕಣ ಬರಹ ಸಂಕಲನವನ್ನು ಪ್ರೊ. ಅ. ರಾ. ಮಿತ್ರರು ಲೋಕಾರ್ಪಣಗೊಳಿಸಿದರು. ಅಮೆರಿಕದಲ್ಲಿಯೇ ಮುದ್ರಣಗೊಂಡು, ಬೆಳಕು ಕಂಡ ಮೊದಲ ಕನ್ನಡ ಪುಸ್ತಕವೆಂಬ ದಾಖಲೆ ಈ ಪುಸ್ತಕದ ವಶವಾಯಿತು.
ಡಾ. ಎಚ್.ಎಸ್. ರಾಘವೇಂದ್ರ ರಾವ್ ಅವರು ” ಅಮೆರಿಕದ ಕನ್ನಡಿಗರ ಸಾಹಿತ್ಯ ಸೃಷ್ಟಿ” – ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಭೋಜನ ವಿರಾಮದ ನಂತರ ಅ. ರಾ. ಮಿತ್ರರೊಡನೆ ನಡೆದ ಸಂವಾದ ಪ್ರಶ್ನೋತ್ತರ ಕಾರ್ಯಕ್ರಮಕ್ಕೆ ಸಭಿಕರಿಂದ ಅನೇಕ ಉತ್ತಮ ಪ್ರಶ್ನೆಗಳು ಹರಿದು ಬಂದಿದ್ದವು. ವಂದನಾರ್ಪಣೆ, ವಿದಾಯ ಗೀತೆಗಳೊಂದಿಗೆ ಸಂಭ್ರಮದ ವಸಂತೋತ್ಸವ ಮುಕ್ತಾಯ ಕಂಡಿತು. ***
ಕನ್ನಡ ಸಾಹಿತ್ಯ ರಂಗದ ಮೈಲಿಗಲ್ಲುಗಳು
೨೦೦೪
ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. (Federal EIN: 20-0939357)
ಮೇ ೨೯, ಮೊಟ್ಟಮೊದಲ ಕನ್ನಡ ಸಾಹಿತ್ಯ ಸಮ್ಮೇಳನ, ಫ಼ಿಲಡೆಲ್ಫ಼ಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ.
ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ)
ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ
ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣ: “ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ”
ಪುಸ್ತಕ ಬಿಡುಗಡೆ: “ಕುವೆಂಪು ಸಾಹಿತ್ಯ ಸಮೀಕ್ಷೆ” ಪ್ರಧಾನ ಸಂಪಾದಕ: ನಾಗ ಐತಾಳ
೨೦೦೫
ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮
ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್‍ವುಡ್ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ
ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ, ಕಸ್ತೂರಿ ಕನ್ನಡ ಸಂಘ, ಸಾನ್ ಡಿಯೇಗೋ, ಮತ್ತು “ಅಂಜಲಿ,” ಲಾಸ್ ಏಂಜಲಿಸ್
ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ
ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ”
ಪುಸ್ತಕ ಬಿಡುಗಡೆ: “ಆಚೀಚೆಯ ಕತೆಗಳು” ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ
೨೦೦೬
ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಎರಡು ದಿನಗಳ ಕನ್ನಡ ಸಾಹಿತ್ಯ ಚರಿತ್ರೆಯ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ.
ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಮುದ್ರಿಕೆಗಳ (CD) ಸಂಪುಟದ ಹಂಚಿಕೆ.
೨೦೦೭
೨೦೦೮
ಆಡಳಿತ ಮಂಡಲಿಯ ಪುನರ್ರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ
***
ವಿ.ಸೂ. ಮುಖ್ಯ ಅತಿಥಿಗಳ ಭಾಷಣಗಳನ್ನು ಪ್ರತ್ಯೇಕವಾಗಿ ಮುದ್ರಿಸಿದೆ. ಇವನ್ನು ಸಮ್ಮೇಳನದಲ್ಲಿ ಉಚಿತವಾಗಿ ಪಡೆಯಬಹುದು, ಪುಸ್ತಕಗಳನ್ನು ಕೊಳ್ಳಬಹುದು.